ಒಳ ಉಡುಪಿನಲ್ಲಿ ಕೊಹ್ಲಿ ಜೊತೆಗೆ ಪೋಸ್ : ಟ್ರೋಲ್ ಗೆ ಗುರಿಯಾದ ವೇಗಿ ಬೂಮ್ರಾ

0

(ಕಾರವಾರ ನ್ಯೂಸ್)ನಾರ್ಥ್ ಸೌಂಡ್ : ಅಂಟಿಗುವಾದಲ್ಲಿ ಬೀಚ್ ವೊಂದರಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಎಂಜಯ್ ಮಾಡುತ್ತಿರುವ ಚಿತ್ರವೊಂದನ್ನು ವೇಗಿ ಜಸ್ಪ್ರೀತ್ ಬೂಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ  ನಾಯಕ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರರು ಬೀಚ್ ನಲ್ಲಿ ಸುತ್ತಾಡಿ ಎಂಜಯ್ ಮಾಡಿರುವ ಪೋಟೋಗಳನ್ನು ಶೇರ್ ಮಾಡಿದ್ದಾರೆ.

ಆದಾಗ್ಯೂ, ಕೊಹ್ಲಿ ಜೊತೆಗೆ ಬೂಮ್ರಾ ತೆಗೆಸಿಕೊಂಡಿರುವ ಪೋಟೋಗೆ  ನೆಗೆಟೀವ್ ಕಾರಣದಿಂದಾಗಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಬೂಮ್ರಾ ಉದ್ದೇಶ ಬೇರೆನೂ ಇದೆ ಎಂಬಂತೆ ಅವರು ಧರಿಸಿರುವ ಉಡುಪಿನಿಂದ ಬಹಿರಂಗವಾಗುತ್ತಿದ್ದು, ಕೆಲವರು ತೀರಾ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ಪೋಟೋ ಅಸಹ್ಯವಾಗಿದೆ ಎಂದು ಮತ್ತೆ ಕೆಲವರು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here