ಶ್ರೀಲಂಕಾದ ಅಭಿಮಾನಿಗಳು ಆಕ್ರೋಶದಿಂದ ಗ್ರೌಂಡ್ ಗೆ ಬಾಟಲ್ ಎಸೆದಾಗ ಧೋನಿ ಮಾಡಿದ್ದೇನು ಗೊತ್ತೇ?

0

ನ್ಯೂಸ್ ಕನ್ನಡ ವರದಿ-(28.08.17): ಭಾರತ ತಂಡದ ವಿರುದ್ಧ ಅತಿಥೇಯ ಶ್ರೀಲಂಕಾ ತಂಡವು ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತ ಸಂದರ್ಭ ಶ್ರೀಲಂಕಾ ಅಭಿಮಾನಿಗು ಆಟಗಾರರಿದ್ದ ಬಸ್ ಗೆ ಘೇರಾವ್ ಹಾಕಿದ್ದರು. ಇದೀಗ ಮತ್ತ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆದ್ದು ಭಾರತ ತಂಡವು ಏಕದಿನ ಸರಣಿಯನ್ನೂ ಕೈವಶ ಮಾಡಿಕೊಂಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ನಿನ್ನೆಯ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 8 ರನ್ ಗಳ ಅಗತ್ಯವಿದ್ದಾಗ ಆಕ್ರೋಶಗೊಂಡ ಶ್ರೀಲಂಕಾ ತಂಡದ ಅಭಿಮಾನಿಗಳು ಮೈದಾನಕ್ಕೆ ಬಾಟಲ್ ಗಳನ್ನು ಎಸೆಯತೊಡಗಿದರು. ಈ ವೇಳೆ ಕೆಲಕ್ಷಣ ಪಂದ್ಯಾಟವು ಸ್ಥಗಿತಗೊಂಡಿತ್ತು. ಈ ವೇಳೆ ನಮ್ಮ ಕ್ಯಾಪ್ಟನ್ ಕೂಲ್ ಧೋನಿ ಯಾವುದೇ ಪ್ರತಿಕ್ರಿಯೆಯನ್ನು ತೋರದೇ ಮೈದಾನದಲ್ಲೆ ಮಕಾಡೆ ಮಲಗಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು. ಯಾವುದೇ ರೀತಿಯ ಆಕ್ರೋಶ ವ್ಯಕ್ತಪಡಿಸದೇ ಮೈದಾನದಲ್ಲಿ ಮಲಗಿದ ಧೋನಿ ವೀಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here