ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಾಳೆ ಪೂರ್ಣ: ಸಿಎಂ ಯಡಿಯೂರಪ್ಪ

0

(ಕಾರವಾರ ನ್ಯೂಸ್)ನವದೆಹಲಿ: ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಾಳೆ ಪೂರ್ಣ ವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ‌ಹೇಳಿಕೆ ನೀಡಿದ್ದಾರೆ.

ನವ ದೆಹಲಿಯಲ್ಲಿ ‌ಮಾತನಾಡಿದ ಅವರು ನಾಳೆ ರಾಜ್ಯ ಸಚಿವ ಸಂಪುಟ ಸಭೆಯಿದ್ದು, ಎಷ್ಟು‌ ಮಂದಿ ಉಪಮುಖ್ಯಮಂತ್ರಿ ಯಾಗುತ್ತಾರೆ ಎಂಬುದು‌ ತಿಳಿಯಲಿದೆ. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ್ದು ಅದನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.

ಲಕ್ಷ್ಮಣಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ಬೇಸರವಿದೆ ಪಕ್ಷದ ವರಿಷ್ಟರ ಆದೇಶದಂತೆ‌ ಸವದಿಗೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ‌ ಬೆಳಗಾವಿಯ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು.

ಪ್ರಧಾನಿ ಹಾಗೂ ಪಕ್ಷದ ವರಿಷ್ಟರು ನೀಡಿರುವ ಸಲಹೆ ಸೂಚನೆ ಪಾಲಿಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೆಡಿಎಸ್ ‌ಹಾಗು ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇದೆ. ಸಚಿವ ಸ್ಥಾನ ದೊರೆಯದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು.

ಸಿಂಧೂ ಗೆಲುವಿಗೆ ಸಿಎಂ ಅಭಿನಂದನೆ 
ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಂಗಾರದ ‌ಪದಕ ಗೆದ್ದ ಪಿ.ವಿ.ಸಿಂಧೂ ಗೆ ರಾಜ್ಯ ಸರ್ಕಾರ ಐದು ಲಕ್ಷ ರೂ ಬಹುಮಾನ ನೀಡಿ ಗೌರವಿಸಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here