ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಅರುಣ್ ಜೇಟ್ಲಿ ಕಳೇಬರ; ಅಮಿತ್ ಶಾ ಅಂತಿಮ ನಮನ, ಅಪರಾಹ್ನ ಅಂತ್ಯಕ್ರಿಯೆ

0

(ಕಾರವಾರ ನ್ಯೂಸ್)ನವದೆಹಲಿ: ಕೇಂದ್ರದ ಮಾಜಿ ವಿತ್ತ ಮಂತ್ರಿ, ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಮೃತದೇಹವನ್ನು ಭಾನುವಾರ ಬೆಳಗ್ಗೆ ಬಿಜೆಪಿ ಕೇಂದ್ರ ಕಚೇರಿಗೆ ಕರೆತರಲಾಯಿತು. ಅಲ್ಲಿ ಜೇಟ್ಲಿ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ತಮ್ಮ ಅಗಲಿದ ನಾಯಕನಿಗೆ ಅಂತಿಮ ದರ್ಶನ ನೀಡಿ ಗೌರವ ನಮನ ಸಲ್ಲಿಸಿದರು.


ಅರುಣ್ ಜೇಟ್ಲಿಯವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಜೇಟ್ಲಿಯವರ ಕಳೇಬರವನ್ನು ಕೈಲಾಶ್ ಕಾಲೊನಿ ನಿವಾಸದಿಂದ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಗೆ ಕರೆತರಲಾಯಿತು. ಇಂದು ಮಧ್ಯಾಹ್ನದವರೆಗೆ ಬಿಜೆಪಿ ಕಚೇರಿಯ ಪತ್ರಿಕಾಗೋಷ್ಠಿ ಕೊಠಡಿಯಲ್ಲಿ ಇರಿಸಲಾಗುತ್ತಿದ್ದು ಅಲ್ಲಿಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೋಗಿ ಅಂತಿಮ ನಮನ ಸಲ್ಲಿಸಿದ್ದಾರೆ. 


ಬಿಜೆಪಿ ಕಚೇರಿಯಲ್ಲಿ ಈಗ ಜೇಟ್ಲಿಯವರ ಪುತ್ರ, ಪತ್ನಿ ಹಾಗೂ ಸಂಬಂಧಿಕರು ಇದ್ದಾರೆ. ಇಂದು ಅಪರಾಹ್ನ 2.30ರ ಸುಮಾರಿಗೆ ಯಮುನಾ ನದಿ ತೀರದಲ್ಲಿರುವ ನಿಗಂಬೋದ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜೇಟ್ಲಿಯವರ ಅಂತ್ಯಕ್ರಿಯೆ ನೆರವೇರಲಿದೆ.

LEAVE A REPLY

Please enter your comment!
Please enter your name here