ಕೆ.ಎಸ್.ಆರ್.ಟಿ.ಸಿ ಬಸ್ಸ್ ಹಾಗೂ ಬೈಕ್ ಡಿಕ್ಕಿ: ಇಬ್ಬರ ದಾರುಣ ಸಾವು

0

ಶಿರಸಿ (ಕಾರವಾರ ನ್ಯೂಸ್ ವರದಿ): ಕೆ.ಎಸ್.ಆರ್.ಟಿ.ಸಿ ಬಸ್ಸ್ ಹಾಗೂ ಬೈಕ್ ಡಿಕ್ಕಿಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಸಹಸ್ರಲಿಂಗ ಸಮೀಪ ನಡೆದಿದೆ.

ಸಹಸ್ರ ಲಿಂಗದ ಹುಳಗೋಳ್ ನಲ್ಲಿ ಈ ದುರ್ಘಟನೆ ನಡೆದಿದ್ದು ಶಿರಸಿ ಉಳವಿ ಬಸ್ಸ್ ಹಾಗೂ ಬೈಕ್ ನಡುವೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ ತಾಲೂಕಿನ ಸಜ್ಜಾ ನಗರದ ಗಗನ್ ಬಸವರಾಜ್ ಹಾಗೂ ಮುಸ್ಲಿಂ ಗಲ್ಲಿಯ ಶಖೀಬ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೋಲಿಸರು ಆಗಮಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here